Thale-Harate Kannada Podcast cover art

Thale-Harate Kannada Podcast

Written by: IVM Podcasts
  • Summary

  • ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನಲ್ಲಿ, ಕನ್ನಡ ಮತ್ತು ಕಂಗ್ಲಿಷಿನಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಮಾತು - ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನಂತಹ ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಳವಾದ ಮಾತು. ನಿಮ್ಮ ಹೊಸ್ಟ್ಸ್ ಪವನ್ ಶ್ರೀನಾಥ್, ಗಣೇಶ್ ಚಕ್ರವರ್ತಿ ಮತ್ತು ಸೂರ್ಯ ಪ್ರಕಾಶ್ ಬಿ.ಎಸ್. ಹೊಸ ಸಂಚಿಕೆಗಳು ಪ್ರತಿವಾರ. ಬನ್ನಿ ಕೇಳಿ.

    The Thale-Harate Kannada Podcast is a weekly talkshow that bridges Kannada and English, as well as Karnataka and the world. Every week, hosts Pavan Srinath, Surya Prakash BS and Ganesh Chakravarthi talk to guests about almost anything under the sun, and try to have fun while doing so. The show's deep conversations span everything, including culture, history, science public policy, current affairs, geopolitics and more. The show also keeps a keen eye on everything Bengaluru and Karnataka. Follow the podcast at @haratepod across all social media.

    2024 IVM Podcasts
    Show More Show Less
Episodes
  • ಎಲ್ಲ ಓಕೆ, ಬಿಯರ್ ಯಾಕೆ? Spirit-ual Stories ft. Pavan Srinath
    Aug 4 2022
    2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ ಬದಲಾಗಿದೆ ಎಂಬುದರ ಕುರಿತು ಮಾತನಾಡುತ್ತಾರೆ.Indians in 2022 are not just enjoying drinking alcoholic beverages, but are also creating new brands of whiskeys, gins, beers and more that are being celebrated both at home and abroad. Host Pavan Srinath talks to Ganesh Chakravarti about how alcoholic drinks are made, their brief history, and how Indian liquor industry is being transformed in the last 10-15 years.Warning: Consumption of alcohol is injurious to health. Excessive alcohol consumption can lead to addiction as well as various health problems. Do not drink and drive, as you will be putting the safety of you and of others at risk.*Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon!ತಲೆ ಹರಟೆ ಕನ್ನಡ ಪಾಡ್‌ಕಾಸ್ಟ್‌ನ 146ನೇ ಸಂಚಿಕೆಯಲ್ಲಿ, ಪವನ್ ಮತ್ತು ಗಣೇಶ್ ಕನಿಷ್ಠ 10,000 ವರ್ಷಗಳಿಂದ ಮಾನವ ಸಮಾಜದ ಭಾಗವಾಗಿರುವ ಮದ್ಯಪಾನದ ತಯಾರಿಕೆ ಮತ್ತು ಸೇವನೆಯ ಕುರಿತು ಚರ್ಚಿಸುತ್ತಾರೆ.ಬಟ್ಟಿ ಇಳಿಸುವಿಕೆಯ ತಂತ್ರಗಳನ್ನು ಬಳಸಿಕೊಂಡು ವಿವಿಧ ಮದ್ಯಪಾನೀಯಗಳನ್ನು ಹೇಗೆ ಉತ್ಪಾದಿಸಲಾಗುತ್ತೆ ಎಂಬುವುದರ ಕುರಿತು ಪವನ್ ಮಾತಾಡುತ್ತಾರೆ. ಭಾರತ, ವಿಶೇಷವಾಗಿ ಸ್ವತಂತ್ರ ಭಾರತ ಸರ್ಕಾರಗಳ, ಮದ್ಯವನ್ನು ನಿಷೇಧಿಸುವ ಅಥವಾ ಹೆಚ್ಚು ತೆರಿಗೆ ವಿಧಿಸುವ ನಿರ್ಣಯದ ಕುರಿತು ಮತ್ತು ಪ್ರತಿ ಹಂತದಲ್ಲೂ ಸರ್ಕಾರ ಇದನ್ನ ನಿಯಂತ್ರಿಸುವ ವಿಷಯದ ಕುರಿತು ಅವರು ಇಲ್ಲಿ ಚರ್ಚಿಸಿದ್ದಾರೆ. ಪವನ್ ಅವರು IMFL ಗಳು ಅಥವಾ "ಭಾರತೀಯ ನಿರ್ಮಿತ ವಿದೇಶಿ ಮದ್ಯಗಳ" ಉತ್ಪಾದನೆಯ ಕುರಿತು ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಕಂಪನಿಗಳು ಹೇಗೆ ರಾಷ್ಟಮಟ್ಟದಲ್ಲಿ ಮತ್ತು ಅಂತಾರಾಷ್ಟ್ರೀಯಮಟ್ಟದಲ್ಲಿ ಹೆಸರು ಮಾಡುತ್ತಿದೆ ಎಂದು ತಿಳಿಸಿದ್ದಾರೆ ಜೊತೆಗೆ ಬ್ರಿಟಿಷರಿಂದ ಭಾರತೀಯರಿಗೆ ಪರಿಚಿತವಾದ ಜಿನ್ ಮತ್ತು ಟಾನಿಕ್ ಕುರಿತು ಕೆಲವು ಆಸಕ್ತಿಕರ ವಿಷಯಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ.On Episode 146 of the Thale-Harate Kannada Podcast, hosts Pavan and Ganesh sit down to discuss the brewing, preparation and consumption of alcoholic beverages, an activity that has been a part of human society for at least 10,000 years.Pavan shares how various beverages are created using techniques of fermentation and distillation. He also discusses how India, especially Independent Indian governments have viewed alcohol as something to either be banned, or taxed heavily and controlled in every aspect. He discusses the creation of IMFLs or “Indian Made Foreign Liquors” and how it is only over the last 10-15 years that Indian companies are moving beyond this to make high quality alcoholic beverages and liquors for both Indians and the world. He also shares how his drink of choice is a Gin and Tonic, a mixed drink that developed because of the colonisation of India by the British.ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/ , Twitter: https://twitter.com/HaratePod/ , Instagram: https://instagram.com/haratepod/ and YouTube: https://youtube.com/HaratePod .ಈಮೇಲ್ ಕಳಿಸಿ, send us an email at haratepod@gmail.com or ...
    Show More Show Less
    51 mins
  • ಕಪ್ಪೆಗಳು ಸಾರ್ ಕಪ್ಪೆಗಳು! The Frogs of India ft. Gururaja KV
    Jul 21 2022
    ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ ಅನ್ವೇಷಿಸಬೇಕಾಗಿದೆ ಎಂಬುದನ್ನು ಅವರು ಚರ್ಚಿಸಿದ್ದಾರೆ.Batrachologist or Frog expert, Dr Gururaja KV shares the beauty, wonder and the biology of frogs and toads with Pavan Srinath. He shares how over 200 new species of amphibians have been discovered in India just in the last 20 years, and how there is more science to be explored in the coming decades.*Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon!ನಮ್ಮಲ್ಲಿ ಹೆಚ್ಚಿನವರು ಪ್ರತೀ ಮಳೆಗಾಲದಲ್ಲಿ ಕಪ್ಪೆಗಳು ವಟರ್ ಗುಟ್ಟುವುದನ್ನು ಕೇಳುತ್ತಲೇ ಬೆಳೆದಿದ್ದೇವೆ ಮತ್ತು ನಮ್ಮ ಮನೆಯ ಸುತ್ತ ಕಪ್ಪೆ ಹಾರುವುದನ್ನು ಕಂಡು ಹೆದರಿದ್ದು ಇದೆ. ಸರೀಸೃಪಗಳು, ಪಕ್ಷಿಗಳು ಮತ್ತು ದೊಡ್ಡ ಸಸ್ತನಿಗಳತ್ತ ಸಾಮಾನ್ಯವಾಗಿ ನಮ್ಮ ಗಮನ ಸೆಳೆಯುತ್ತೆ. ಆದರೆ ನಾವು ಸಾಮಾನ್ಯವಾಗಿ ನಮ್ಮ ಸುತ್ತ ಮುತ್ತ ಪರಿಸರದ ಪ್ರಮುಖ ಭಾಗವಾಗಿರುವ ಕಪ್ಪೆಗಳು ಮತ್ತು ನೆಲಗಪ್ಪೆಗಳನ್ನು ನಿರ್ಲಕ್ಷಿಸುತ್ತೇವೆ.ಡಾ ಗುರುರಾಜ ಕೆವಿ ಅವರು ಉಭಯಚರಗಳನ್ನು ಅಧ್ಯಯನ ಮಾಡುವ ವಿಶೇಷ ಆಸಕ್ತಿ ಹೊಂದಿದ್ದು ಜೊತೆಗೆ ಪ್ರಸ್ತುತ ಸೃಷ್ಟಿ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ ಮತ್ತು ಗುಬ್ಬಿ ಲ್ಯಾಬ್ಸ್‌ನಲ್ಲಿ ಅಡ್ಜಂಕ್ಟ್ ಫೆಲೋ ಆಗಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪಡೆದಿರುವ ಇವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧನೆಯನ್ನೂ ಮಾಡಿದ್ದಾರೆ, ಗುರುರಾಜ ಅವರು 20 ವರ್ಷಗಳಿಂದ ಕಪ್ಪೆಗಳು ಮತ್ತು ನೆಲಗಪ್ಪೆಗಳ ಬಗ್ಗೆ ವಿಶೇಷ ಅಧ್ಯಯನ ಮಾಡುತ್ತಿದ್ದಾರೆ.ಭಾರತದಲ್ಲಿ 20 ಕ್ಕೂ ಹೆಚ್ಚು ಹೊಸ ಕಪ್ಪೆ ಜಾತಿಗಳನ್ನು ಪತ್ತೆಹಚ್ಚುವಲ್ಲಿ ಮತ್ತು ಗುರುತಿಸುವಲ್ಲಿ ಇವರ ಪಾತ್ರ ಮಹತ್ತರವಾದದ್ದು, ಪಶ್ಚಿಮ ಘಟ್ಟಗಳು ಮತ್ತು ಅದರಾಚೆಗೆ ತಮ್ಮ ಸಂಶೋಧನೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಲೆ-ಹರಟೆ ಕನ್ನಡ ಪಾಡ್‌ಕಾಸ್ಟ್ ನ ಸಂಚಿಕೆ 145 ರಲ್ಲಿ, ಡಾ ಗುರುರಾಜ ಅವರು ಕಪ್ಪೆಗಳ ಮೇಲಿನ ತಮ್ಮ ಪ್ರೀತಿ ಮತ್ತು ಕೌತುಕವನ್ನು ಹಂಚಿಕೊಂಡಿದ್ದಾರೆ, ಈ ಆಕರ್ಷಕ ಜೀವಿಗಳನ್ನು ಅಧ್ಯಯನ ಮಾಡಲು ಅವರಿಗೆ ಪ್ರೇರಣೆ ಏನು? ಹೊಸ ಜಾತಿ ಕಪ್ಪೆಗಳನ್ನುಗಳನ್ನು ಕಂಡುಹಿಡಿಯುವ ಪ್ರಕ್ರಿಯೆ ಯಾವ ರೀತಿ ಇರುತ್ತೆ? ಮತ್ತು ಕಪ್ಪೆಗಳ ನಡವಳಿಕೆ ಯಾವರೀತಿ ಇರುತ್ತೆ? ಎಂಬೆಲ್ಲ ವಿಷಯಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಬನ್ನಿ ಕೇಳಿ!gururajakv.net ನಲ್ಲಿ ಮತ್ತು ಅವರ ಗೂಗಲ್ ಸ್ಕಾಲರ್ ಪ್ರೊಫೈಲ್‌ನಲ್ಲಿ ಡಾ ...
    Show More Show Less
    1 hr and 17 mins
  • ಬೆಂಗಳೂರಿನ ವಿವಿಧ ಸರ್ಕಾರಿ ಸಂಸ್ಥೆಗಳು. The Many Government Agencies of Bengaluru! ft. Sudhira HS
    Jul 14 2022
    ಕರ್ನಾಟಕದ ಕೆಪಿಟಿಸಿಎಲ್, ಬೆಸ್ಕಾಂ ಮತ್ತು ಬೆಂಗಳೂರಿನ ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಟಿಸಿ ಮತ್ತು ಬಿಡಿಎಯಂತಹ ವಿವಿಧ ಸರ್ಕಾರಿ ಸಂಸ್ಥೆಗಳು ಹೇಗೆ ವಿಕಸನಗೊಂಡಿವೆ, ಅವು ಹೇಗೆ ಕಾರ್ಯನಿರ್ವಹಿಸುತ್ತಿವೆ ಮತ್ತು ಉತ್ತಮ ನಗರ ಆಡಳಿತಕ್ಕಾಗಿ ಅವುಗಳನ್ನು ಹೇಗೆ ಮರುರೂಪಿಸಬೇಕಾಗಿದೆ ಎಂಬುದರ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ನಗರ ಆಡಳಿತ ಸಂಶೋಧಕ ಡಾ ಸುಧೀರ ಎಚ್‌ಎಸ್ ಮಾತನಾಡುತ್ತಾರೆ. Urban Governance researcher Dr Sudhira HS talks to host Pavan Srinath about how various government agencies like Karnataka’s KPTCL, BESCOM and Bengaluru’s BWSSB, BMTC and BDA have evolved – how they are functioning and how they need to be reimagined for good urban governance. He unpacks the plethora of PSUs, Parastatal agencies, SPVs and Boards that have taken over significant aspects of local government.*Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon!ಬೆಂಗಳೂರಿನಂತಹ ಮಹಾನಗರವು ಹಲವಾರು ಸರ್ಕಾರಿ ಸಂಬಂಧಿತ ಸಂಸ್ಥೆಗಳನ್ನು ಹೊಂದಿದೆ, ಅದು ಅಗತ್ಯ ಸೇವೆಗಳನ್ನು ಅಥವಾ ನಿವಾಸಿಗಳ ದೈನಂದಿನ ಜೀವನಕ್ಕೆ ಮುಖ್ಯವಾದ ಆಡಳಿತವನ್ನು ಮಾಡುತ್ತದೆ. ಕೆಲವನ್ನು ಹೆಸರಿಸೋದಾದ್ರೆ, ಬೆಂಗಳೂರಿನಲ್ಲಿ ಬಿ.ಡಬ್ಲ್ಯೂ.ಎಸ್.ಎಸ್.ಬಿ ಪೈಪ್‌ಲೈನ್ ನೀರು ಸರಬರಾಜು ಮತ್ತು ಒಳಚರಂಡಿಯನ್ನು ನಿರ್ವಹಿಸುತ್ತದೆ, ಬೆಸ್ಕಾಂ ವಿದ್ಯುತ್ ಸಂಭಂದಿತ ಕೆಲಸಗಳನ್ನ ನೋಡಿಕೊಳ್ಳುತ್ತೆ, ಬಿ.ಎಂ.ಟಿ.ಸಿ ಸಾರ್ವಜನಿಕ ಬಸ್‌ಗಳನ್ನು ನಿರ್ವಹಿಸುತ್ತದೆ, ಬಿ.ಎಂ.ಆರ್.ಸಿ.ಎಲ್ ನಗರ ಮೆಟ್ರೋ ರೈಲನ್ನು ನಿರ್ವಹಿಸುತ್ತದೆ. ಅದೇ ರೀತಿ, ರಾಜ್ಯದಾದ್ಯಂತ ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸುವ ಅನೇಕ ಸಂಸ್ಥೆಗಳಿವೆ. ಬಹುತೇಕ ಎಲ್ಲವೂ ಸ್ಥಳೀಯವಾಗಿ ಚುನಾಯಿತ ಸರ್ಕಾರಗಳಿಂದ ಅಂತರ ಕಾಯ್ದುಕೊಂಡಿದ್ದಾರೆ ಮತ್ತು ಸಾರ್ವಜನಿಕ ಉದ್ದೇಶಗಳನ್ನು ಉತ್ತಮವಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ.ಈ ಸಾರ್ವಜನಿಕ ಏಜೆನ್ಸಿಗಳ ಅವ್ಯವಸ್ಥೆಗಳ ಕುರಿತು ವಿವರಿಸಲು ಸುಧೀರ ಎಚ್‌ಎಸ್ ರವರು ತಲೆ-ಹರಟೆ ಕನ್ನಡ ಪಾಡ್‌ಕಾಸ್ಟ್‌ನ 144 ನೇ ಸಂಚಿಕೆಯಲ್ಲಿ ನಮ್ಮ ಜೊತೆ ಸೇರಿಕೊಂಡಿದ್ದಾರೆ. ಅವರು ಕರ್ನಾಟಕದಲ್ಲಿ ವಿದ್ಯುತ್ ಸಂಸ್ಥೆಗಳ ವಿಕಸದ ಕುರಿತು ಮಾತನಾಡುತ್ತಾರೆ ಜೊತೆಗೆ ಸರ್ಕಾರಿ ಸಂಸ್ಥೆಗಳು ವಾಸ್ತವದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಹಾಗೆಯೇ ಎಲ್ಲಿ ಮತ್ತು ಹೇಗೆ ವಿಫಲಗೊಳ್ಳುತ್ತವೆ ಎಂಬುವುದನ್ನೂ ವಿವರಿಸುತ್ತಾರೆ. ಅವರು ಕಾರ್ಪೊರೇಟೀಕರಣದ ಮಿತಿಗಳನ್ನು ಮತ್ತು ಆಡಳಿತದಲ್ಲಿ ಅದರ ಪಾತ್ರದ ಕುರಿತು ವಿವರಿಸುತ್ತಾ ಮಾರುಕಟ್ಟೆ ಕಾರ್ಯವಿಧಾನಗಳು ಎಲ್ಲಿ ಉತ್ತಮವಾಗಿ ಅನ್ವಯಿಸಬಹುದು ಮತ್ತು ಎಲ್ಲಿ ವಿಫಲವಾಗಬಹುದು ಎಂದು ಮಾತನಾಡಿದ್ದಾರೆ.ಡಾ ಸುಧೀರ ಎಚ್‌ಎಸ್ ಅವರು ಗುಬ್ಬಿ ಲ್ಯಾಬ್ಸ್‌ನ ನಿರ್ದೇಶಕರಾಗಿದ್ದಾರೆ, ಇದು ಕರ್ನಾಟಕದ ತುಮಕೂರು ಬಳಿಯ ಗುಬ್ಬಿ ಮೂಲದ ಸಂಶೋಧನಾ ಸಂಸ್ಥೆಯಾಗಿದೆ. ಗುಬ್ಬಿ ಲ್ಯಾಬ್ಸ್ ಮ್ಯಾಪಿಂಗ್, ನಗರ ...
    Show More Show Less
    1 hr and 7 mins

What listeners say about Thale-Harate Kannada Podcast

Average Customer Ratings
Overall
  • 4 out of 5 stars
  • 5 Stars
    3
  • 4 Stars
    0
  • 3 Stars
    0
  • 2 Stars
    0
  • 1 Stars
    1
Performance
  • 4 out of 5 stars
  • 5 Stars
    2
  • 4 Stars
    1
  • 3 Stars
    0
  • 2 Stars
    0
  • 1 Stars
    1
Story
  • 4 out of 5 stars
  • 5 Stars
    2
  • 4 Stars
    1
  • 3 Stars
    0
  • 2 Stars
    0
  • 1 Stars
    1

Reviews - Please select the tabs below to change the source of reviews.

Sort by:
Filter by:
  • Overall
    5 out of 5 stars
  • Performance
    4 out of 5 stars
  • Story
    4 out of 5 stars

great

loved it, is light , it's informative. there us variety. didn't get heavy on mind.

Something went wrong. Please try again in a few minutes.

You voted on this review!

You reported this review!

  • Overall
    5 out of 5 stars
  • Performance
    5 out of 5 stars
  • Story
    5 out of 5 stars

love it..... love ur podcast

hesaru maatra tale harte.... but very informative indeed....... keep it up... absolutely love it.

Something went wrong. Please try again in a few minutes.

You voted on this review!

You reported this review!

  • Overall
    1 out of 5 stars
  • Performance
    1 out of 5 stars
  • Story
    1 out of 5 stars

didn't find worth

slow phase, not much interesting n entertaining or infotainment, better at information worth clear. thanks you

Something went wrong. Please try again in a few minutes.

You voted on this review!

You reported this review!