• ಕಪ್ಪೆಗಳು ಸಾರ್ ಕಪ್ಪೆಗಳು! The Frogs of India ft. Gururaja KV

  • Jul 21 2022
  • Length: 1 hr and 17 mins
  • Podcast
ಕಪ್ಪೆಗಳು ಸಾರ್ ಕಪ್ಪೆಗಳು! The Frogs of India ft. Gururaja KV cover art

ಕಪ್ಪೆಗಳು ಸಾರ್ ಕಪ್ಪೆಗಳು! The Frogs of India ft. Gururaja KV

  • Summary

  • ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ ಅನ್ವೇಷಿಸಬೇಕಾಗಿದೆ ಎಂಬುದನ್ನು ಅವರು ಚರ್ಚಿಸಿದ್ದಾರೆ.Batrachologist or Frog expert, Dr Gururaja KV shares the beauty, wonder and the biology of frogs and toads with Pavan Srinath. He shares how over 200 new species of amphibians have been discovered in India just in the last 20 years, and how there is more science to be explored in the coming decades.*Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon!ನಮ್ಮಲ್ಲಿ ಹೆಚ್ಚಿನವರು ಪ್ರತೀ ಮಳೆಗಾಲದಲ್ಲಿ ಕಪ್ಪೆಗಳು ವಟರ್ ಗುಟ್ಟುವುದನ್ನು ಕೇಳುತ್ತಲೇ ಬೆಳೆದಿದ್ದೇವೆ ಮತ್ತು ನಮ್ಮ ಮನೆಯ ಸುತ್ತ ಕಪ್ಪೆ ಹಾರುವುದನ್ನು ಕಂಡು ಹೆದರಿದ್ದು ಇದೆ. ಸರೀಸೃಪಗಳು, ಪಕ್ಷಿಗಳು ಮತ್ತು ದೊಡ್ಡ ಸಸ್ತನಿಗಳತ್ತ ಸಾಮಾನ್ಯವಾಗಿ ನಮ್ಮ ಗಮನ ಸೆಳೆಯುತ್ತೆ. ಆದರೆ ನಾವು ಸಾಮಾನ್ಯವಾಗಿ ನಮ್ಮ ಸುತ್ತ ಮುತ್ತ ಪರಿಸರದ ಪ್ರಮುಖ ಭಾಗವಾಗಿರುವ ಕಪ್ಪೆಗಳು ಮತ್ತು ನೆಲಗಪ್ಪೆಗಳನ್ನು ನಿರ್ಲಕ್ಷಿಸುತ್ತೇವೆ.ಡಾ ಗುರುರಾಜ ಕೆವಿ ಅವರು ಉಭಯಚರಗಳನ್ನು ಅಧ್ಯಯನ ಮಾಡುವ ವಿಶೇಷ ಆಸಕ್ತಿ ಹೊಂದಿದ್ದು ಜೊತೆಗೆ ಪ್ರಸ್ತುತ ಸೃಷ್ಟಿ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ ಮತ್ತು ಗುಬ್ಬಿ ಲ್ಯಾಬ್ಸ್‌ನಲ್ಲಿ ಅಡ್ಜಂಕ್ಟ್ ಫೆಲೋ ಆಗಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪಡೆದಿರುವ ಇವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧನೆಯನ್ನೂ ಮಾಡಿದ್ದಾರೆ, ಗುರುರಾಜ ಅವರು 20 ವರ್ಷಗಳಿಂದ ಕಪ್ಪೆಗಳು ಮತ್ತು ನೆಲಗಪ್ಪೆಗಳ ಬಗ್ಗೆ ವಿಶೇಷ ಅಧ್ಯಯನ ಮಾಡುತ್ತಿದ್ದಾರೆ.ಭಾರತದಲ್ಲಿ 20 ಕ್ಕೂ ಹೆಚ್ಚು ಹೊಸ ಕಪ್ಪೆ ಜಾತಿಗಳನ್ನು ಪತ್ತೆಹಚ್ಚುವಲ್ಲಿ ಮತ್ತು ಗುರುತಿಸುವಲ್ಲಿ ಇವರ ಪಾತ್ರ ಮಹತ್ತರವಾದದ್ದು, ಪಶ್ಚಿಮ ಘಟ್ಟಗಳು ಮತ್ತು ಅದರಾಚೆಗೆ ತಮ್ಮ ಸಂಶೋಧನೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಲೆ-ಹರಟೆ ಕನ್ನಡ ಪಾಡ್‌ಕಾಸ್ಟ್ ನ ಸಂಚಿಕೆ 145 ರಲ್ಲಿ, ಡಾ ಗುರುರಾಜ ಅವರು ಕಪ್ಪೆಗಳ ಮೇಲಿನ ತಮ್ಮ ಪ್ರೀತಿ ಮತ್ತು ಕೌತುಕವನ್ನು ಹಂಚಿಕೊಂಡಿದ್ದಾರೆ, ಈ ಆಕರ್ಷಕ ಜೀವಿಗಳನ್ನು ಅಧ್ಯಯನ ಮಾಡಲು ಅವರಿಗೆ ಪ್ರೇರಣೆ ಏನು? ಹೊಸ ಜಾತಿ ಕಪ್ಪೆಗಳನ್ನುಗಳನ್ನು ಕಂಡುಹಿಡಿಯುವ ಪ್ರಕ್ರಿಯೆ ಯಾವ ರೀತಿ ಇರುತ್ತೆ? ಮತ್ತು ಕಪ್ಪೆಗಳ ನಡವಳಿಕೆ ಯಾವರೀತಿ ಇರುತ್ತೆ? ಎಂಬೆಲ್ಲ ವಿಷಯಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಬನ್ನಿ ಕೇಳಿ!gururajakv.net ನಲ್ಲಿ ಮತ್ತು ಅವರ ಗೂಗಲ್ ಸ್ಕಾಲರ್ ಪ್ರೊಫೈಲ್‌ನಲ್ಲಿ ಡಾ ...
    Show More Show Less

What listeners say about ಕಪ್ಪೆಗಳು ಸಾರ್ ಕಪ್ಪೆಗಳು! The Frogs of India ft. Gururaja KV

Average Customer Ratings

Reviews - Please select the tabs below to change the source of reviews.